ಭಕ್ತಿಸುಧೆ

ಅಪರಾಧಿ ನಾನಲ್ಲ

ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ

ಕಪಟ ನಾಟಕ ಸೂತ್ರಧಾರಿ ನೀನೇ || ಪ ||

ನೀನೇ ಆಡಿಸದಿರಲು ಜಡ ಒನಿಕೆಯ ಬೊಂಬೆ

ಏನು ಮಾಡಲು ಬಲ್ಲುದು ತಾನೆ ಬೇರೆ

ನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲುಗಳು

ನೀನೇ ಮುಗ್ಗಿಸಲು ಮುಗ್ಗುವ ದೇಹದವನು || 1 ||

ಒಂದೆಂಟು ಬಾಗಿಲುಗಳುಳ್ಳ ಪುರಕೆ

ತನ್ನದೆಂದು ಇಪ್ಪತ್ತಾರು ಮನೆಯಾಳ್ಗಳ

ತಂದು ಕಾವಲ ನಿಲಿಸಿ ಎನ್ನ ನೀ ಒಳಗಿಟ್ಟ

ಮುಂದೆ ಭವದಲಿ ಭವಣಿಪುವದು ನಿನ್ನದನ್ಯಾಯ || ೨ ||

ಯಂತ್ರವಾಹನ ನೀನೇ ಒಳಗಿದ್ದು ಎನ್ನ ಸ್ವ-

ತಂತ್ರನೆಂದೆನಿಸಿ ಕೊಲಿಸುವರೆ ಹೇಳೊ

ಕಂತು ಪಿತ ಲಕ್ಷ್ಮೀಶ ಎಂತಾದಡಂತಹುದಾ-

ನಂತ ಮೂರುತಿ ನಮ್ಮ ಪುರಂದರ ವಿಠಲ || ೨ ||

ಹಂಚಿಕೊಳ್ಳಿ:
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು

ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!

ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.